ಮಂಗಳೂರಿಗೆ ಬರಲಿವೆ 100 ಎಲೆಕ್ಟ್ರಿಕ್ ಬಸ್‌ಗಳು: ಉಡುಪಿ–ಏರ್‌ಪೋರ್ಟ್ ಸೇರಿ ಈ ಮಾರ್ಗಗಳಲ್ಲಿ ಸಂಚಾರಕ್ಕೆ ಸಿದ್ಧತೆ
ಮಂಗಳೂರು: ಕರಾವಳಿ ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕೇಂದ್ರ ಸರ್ಕಾರದ PM E-Bus Sewa ಯೋಜನೆಯಡಿ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳು ಹಂಚಿಕೆಯಾಗಿದ್ದು, ಮಂಗಳೂರು ನಗರ ಮಾತ್ರವಲ್ಲದೆ ಉಡುಪಿ, ಮೂಡುಬಿದಿರೆ ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮಾರ್ಗಗಳಲ್ಲಿಯೂ ಈ ಬಸ್‌ಗಳನ್ನು ಓಡಿಸುವ ಪ್ರಸ್ತಾವನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಪಟ್ಟಿಯಲ್ಲೂ ಮಂಗಳೂರಿಗೆ 100 ಇ-ಬಸ್‌ಗಳು ಮಂಜೂರಾಗಿರುವುದು ದಾಖಲಾಗಿದೆ. Mangaluru Electric Buses ಯೋಜನೆ ಕಾರ್ಯರೂಪಕ್ಕೆ ಬಂದರೆ, …