ಹೊಸ ಟ್ರಾಫಿಕ್ ನಿಯಮಗಳು 2026 ಚಲಾನ್ ದಂಡ: ಕರ್ನಾಟಕ E-Challan & ದಂಡಪಟ್ಟಿ
ಹೊಸ ಟ್ರಾಫಿಕ್ ನಿಯಮಗಳು 2026 ಚಲನ್ ದಂಡ ವಿಷಯ ಕರ್ನಾಟಕದ ಎಲ್ಲಾ ವಾಹನ ಚಾಲಕರಿಗೂ ಬಹಳ ಮುಖ್ಯವಾಗಿದೆ. 2026ರಿಂದ ರಸ್ತೆ ಸುರಕ್ಷತೆ ಹೆಚ್ಚಿಸಲು ಹಾಗೂ ಅಪಘಾತಗಳನ್ನು ಕಡಿಮೆ ಮಾಡಲು ಟ್ರಾಫಿಕ್ ಇಲಾಖೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ವಿಶೇಷವಾಗಿ ಹೆಲ್ಮೆಟ್, ಸೀಟ್ ಬೆಲ್ಟ್, ಓವರ್ ಸ್ಪೀಡ್, ಸಿಗ್ನಲ್ ಜಂಪ್, ಮೊಬೈಲ್ ಬಳಕೆ, ಕುಡಿದು ವಾಹನ ಚಾಲನೆ ಪ್ರಕರಣಗಳಿಗೆ ಈಗ ಹೆಚ್ಚಾಗಿ ದಂಡ ಬೀಳುತ್ತಿದೆ.
ಈ ಲೇಖನದಲ್ಲಿ ನೀವು ಕರ್ನಾಟಕ ಟ್ರಾಫಿಕ್ ದಂಡ 2026 (Updated Table), ಹೊಸ ನಿಯಮಗಳ ಪ್ರಮುಖ ಅಂಶಗಳು, E-Challan ಹೇಗೆ ಕೆಲಸ ಮಾಡುತ್ತದೆ ಮತ್ತು ಚಲಾನ್ ತಪ್ಪಿಸಲು ಸರಳ ಟಿಪ್ಸ್ ಅನ್ನು ತಿಳಿದುಕೊಳ್ಳಬಹುದು.
ಹೊಸ ಟ್ರಾಫಿಕ್ ನಿಯಮಗಳು 2026 ಏಕೆ ಮುಖ್ಯ?
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ದೊಡ್ಡ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವೆಡೆ ವಾಹನ ಸಂಚಾರ ತುಂಬಾ ಹೆಚ್ಚಾಗಿದೆ. ಟ್ರಾಫಿಕ್ ಒತ್ತಡ ಹೆಚ್ಚಾದಂತೆ:
- ಅತಿ ವೇಗ
- ಸಿಗ್ನಲ್ ಜಂಪ್
- ಗಾಡಿ ಪಾರ್ಕಿಂಗ್ ಇಲ್ಲದ ಕಡೆ ವಾಹನ ಪಾರ್ಕಿಂಗ್
- ಮೊಬೈಲ್ ಬಳಸಿ ಡ್ರೈವಿಂಗ್
- ಮದ್ಯಪಾನ ಮಾಡಿ ವಾಹನ ಚಾಲನೆ
ಇಂತಹ ಉಲ್ಲಂಘನೆಗಳು ಹೆಚ್ಚಾಗಿ ಅಪಘಾತ, ಗಾಯ, ಜೀವಹಾನಿಗೆ ಕಾರಣವಾಗುತ್ತಿವೆ. ಅದಕ್ಕಾಗಿ 2026ರಲ್ಲಿ ಟ್ರಾಫಿಕ್ ನಿಯಮಗಳನ್ನು ಕಠಿಣ ಮಾಡಿ ದಂಡವನ್ನು ಹೆಚ್ಚಿಸಲಾಗಿದೆ.
ಕರ್ನಾಟಕ ಟ್ರಾಫಿಕ್ ದಂಡ 2026: Updated Penalty Table
2026ರಲ್ಲಿ ಸಾಮಾನ್ಯವಾಗಿ ಹೆಚ್ಚು ಬರುವ ಟ್ರಾಫಿಕ್ ಉಲ್ಲಂಘನೆಗಳಿಗೆ ವಿಧಿಸುವ ದಂಡಗಳ ಪಟ್ಟಿ ಇಲ್ಲಿದೆ.
Latest Karnataka Traffic Fines 2026 (Updated Table)
| ಸಂಚಾರ ಉಲ್ಲಂಘನೆ | ದಂಡ (₹) |
|---|---|
| ಅತಿ ವೇಗ (ದ್ವಿಚಕ್ರ ವಾಹನ) | ₹1,000 – ₹2,000 |
| ಅತಿವೇಗ (LMV/ಕಾರು) | ₹1,500 – ₹3,000 |
| ಹೆಲ್ಮೆಟ್ ಇಲ್ಲದೆ ಸವಾರಿ | ₹1,000 + ಸಂಭವನೀಯ ಪರವಾನಗಿ ಅಮಾನತು |
| ಸೀಟ್‌ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು | ₹500 |
| ಜಂಪಿಂಗ್ ರೆಡ್ ಸಿಗ್ನಲ್ | ₹1,000 – ₹5,000 |
| ಚಾಲನೆ ಮಾಡುವಾಗ ಮೊಬೈಲ್ ಬಳಸುವುದು | ₹1,500 – ₹3,000 |
| ಪರವಾನಗಿ ಇಲ್ಲದೆ ವಾಹನ ಚಾಲನೆ | ₹5,000 |
| ಕುಡಿದು ವಾಹನ ಚಾಲನೆ | ₹10,000 + ನ್ಯಾಯಾಲಯದ ಪ್ರಕ್ರಿಯೆಗಳು / ಸೆರೆವಾಸ |
| ಓವರ್‌ಲೋಡ್ (ವಾಣಿಜ್ಯ ವಾಹನಗಳು) | ₹5,000 + ಹೆಚ್ಚುವರಿ ಟನ್‌ಗೆ ಹೆಚ್ಚುವರಿ ಶುಲ್ಕ |
| ವಿಮೆ ಇಲ್ಲದೆ ಚಾಲನೆ | ₹2,000 |
| ಸಂಚಾರಕ್ಕೆ ಅಡ್ಡಿ/ ತಪ್ಪಾದ ಪಾರ್ಕಿಂಗ್ | ₹500 – ₹1,500 |
Note: ದಂಡ ಮೊತ್ತವು ಸ್ಥಳ/ಪೊಲೀಸ್ ಪರಿಶೀಲನೆ/ಉಲ್ಲಂಘನೆಯ ಗಂಭೀರತೆ ಪ್ರಕಾರ ಬದಲಾಗುವ ಸಾಧ್ಯತೆ ಇದೆ.
2026ರ ಹೊಸ ಟ್ರಾಫಿಕ್ ನಿಯಮಗಳ ಪ್ರಮುಖ ಅಂಶಗಳು
1) ಹೆಲ್ಮೆಟ್ ನಿಯಮ ಕಡ್ಡಾಯ – ಬೈಕ್ ಸವಾರರಿಗೆ ಎಚ್ಚರಿಕೆ
2026ರಲ್ಲಿ ಹೆಲ್ಮೆಟ್ ನಿಯಮವನ್ನು ಟ್ರಾಫಿಕ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತಿದೆ.
ಬೈಕ್ ಚಾಲಕರು ಮಾತ್ರವಲ್ಲ, ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಉತ್ತಮ. ಅಪಘಾತ ಅದಾಗ ಹೆಚ್ಚು ಅಪಾಯ ಆಗುವುದು ಹಿಂಬದಿ ಸವಾರಿಗೆ ಹಾಗಾಗಿ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.
ಹೆಲ್ಮೆಟ್ ಇಲ್ಲದಿದ್ದರೆ:
- ₹1,000 ದಂಡ
- ಕೆಲವು ಸಂದರ್ಭಗಳಲ್ಲಿ ಲೈಸೆನ್ಸ್ ಮೇಲೆ ಕ್ರಮ ಆಗುವ ಸಾಧ್ಯತೆ
2) ಕಾರು ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯ
ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ ಮಾಡುವವರ ಮೇಲೆ ಈಗ ಹೆಚ್ಚು ಗಮನ ಇದೆ.
ಸೀಟ್ ಬೆಲ್ಟ್ ಇಲ್ಲದಿದ್ದರೆ:
- ₹500 ದಂಡ
ಸೀಟ್ ಬೆಲ್ಟ್ ಅಪಘಾತದ ಸಮಯದಲ್ಲಿ ಜೀವ ಉಳಿಸುವ ಮುಖ್ಯ ಸಾಧನ.
3) ಸಿಗ್ನಲ್ ಜಂಪ್ ಮಾಡಿದರೆ ಭಾರೀ ದಂಡ
ರೆಡ್ ಸಿಗ್ನಲ್ ಜಂಪ್ ಮಾಡಿದರೆ ಅಪಘಾತದ ಅಪಾಯ ಹೆಚ್ಚಾಗುತ್ತದೆ. 2026ರಲ್ಲಿ ಕ್ಯಾಮೆರಾ ನಿಗಾ ಹೆಚ್ಚಿರುವುದರಿಂದ ದಂಡವನ್ನು ಹಾಕಲಾಗುತದೆ
✅ದಂಡ:
- ₹1,000 ರಿಂದ ₹5,000 ವರೆಗೆ
4) ಓವರ್ ಸ್ಪೀಡ್ ಮಾಡಿದರೆ ತಕ್ಷಣ E-Challan
ಅತಿ ವೇಗವೇ ಬಹುತೇಕ ಅಪಘಾತಗಳಿಗೆ ಕಾರಣ. ಈ ಕಾರಣದಿಂದ 2026ರಲ್ಲಿ ಓವರ್ ಸ್ಪೀಡ್ ಮೇಲೆ ಹೆಚ್ಚು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
✅ದಂಡ:
- Two-Wheeler: ₹1,000 – ₹2,000
- LMV/Car: ₹1,500 – ₹3,000
5) ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡಿದರೆ ಕೇಸ್ ಆಗಬಹುದು
ಮೊಬೈಲ್ ಕೈಯಲ್ಲಿ ಹಿಡಿದು ಮಾತನಾಡುವುದು ಅಥವಾ ನೋಡುತ್ತಾ ಚಾಲನೆ ಮಾಡುವುದು ತುಂಬಾ ಅಪಾಯಕಾರಿ.
✅ದಂಡ:
- ₹1,500 ರಿಂದ ₹3,000
ಮೊಬೈಲ್ ಕರೆ ಅಗತ್ಯವಿದ್ದರೆ ವಾಹನವನ್ನು ಸುರಕ್ಷಿತವಾಗಿ ಸೈಡ್‌ಗೆ ನಿಲ್ಲಿಸಿ ನಂತರ ಕರೆ ಮಾಡಿ.
6) ಲೈಸೆನ್ಸ್ ಇಲ್ಲದೆ ಚಾಲನೆ = ದೊಡ್ಡ ಚಲಾನ್
“ಇವತ್ತಿಗೆ ಬಿಡಿ” ಎನ್ನುವ ಕಾಲ ಈಗ ಇಲ್ಲ. ಲೈಸೆನ್ಸ್ ಇಲ್ಲದೇ ಚಾಲನೆ ಮಾಡಿದರೆ ದಂಡ ಭಾರೀ.
✅ ದಂಡ:
- ₹5,000
7) ಡ್ರಂಕ್ ಡ್ರೈವಿಂಗ್‌ಗೆ Zero Tolerance
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು 2026ರಲ್ಲಿ ಅತ್ಯಂತ ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತಿದೆ.
✅ ದಂಡ:
- ₹10,000
- ಜೊತೆಗೆ ಕೋರ್ಟ್ ಪ್ರಕ್ರಿಯೆ / ಜೈಲು ಸಾಧ್ಯತೆ
8) ಇನ್ಶೂರನ್ಸ್ ಇಲ್ಲದೆ ವಾಹನ ಓಡಿಸಿದರೆ ದಂಡ
ಬಹುಮಂದಿ ವಾಹನ ವಿಮೆಯನ್ನು ಸಮಯಕ್ಕೆ ರಿನ್ಯೂ ಮಾಡುವುದಿಲ್ಲ. ಆದರೆ ಈಗ ಟ್ರಾಫಿಕ್ ಚೆಕ್‌ನಲ್ಲಿ ಇದು ಮೊದಲನೆದಾಗಿ ಕೇಳುತ್ತಾರೆ.
✅ ದಂಡ:
- ₹2,000
9) ತಪ್ಪು ಪಾರ್ಕಿಂಗ್ ಮಾಡಿದರೆ ಚಲಾನ್ ಫಿಕ್ಸ್
ನಗರಗಳಲ್ಲಿ ತಪ್ಪು ಪಾರ್ಕಿಂಗ್‌ನಿಂದ ಟ್ರಾಫಿಕ್ ಜಾಮ್ ಆಗುತ್ತದೆ. 2026ರಲ್ಲಿ ತಪ್ಪು ಪಾರ್ಕಿಂಗ್ ಮೇಲೆ ಕ್ರಮ ಹೆಚ್ಚಾಗಿದೆ.
✅ ದಂಡ:
- ₹500 – ₹1,500
10) ಕಮರ್ಷಿಯಲ್ ವಾಹನ ಓವರ್ ಲೋಡಿಂಗ್‌ಗೆ ಹೆಚ್ಚುವರಿ ಶುಲ್ಕ
ಲಾರಿಗಳು/ಟ್ರಕ್‌ಗಳು ಹೆಚ್ಚು ಸರಕು ತುಂಬಿಕೊಂಡು ಓಡಿಸಿದರೆ ರಸ್ತೆ ಹಾಳಾಗುತ್ತದೆ ಮತ್ತು ಅಪಘಾತದ ಅಪಾಯ ಹೆಚ್ಚುತ್ತದೆ.
✅ ದಂಡ:
- ₹5,000 + ಹೆಚ್ಚುವರಿ ಟನ್‌ಗೆ ಹೆಚ್ಚುವರಿ ಫೀಸ್
E-Challan 2026: ಚಲಾನ್ ಹೇಗೆ ಬರುತ್ತದೆ?
2026ರಲ್ಲಿ ಹೆಚ್ಚಿನ ಸ್ಥಳಗಳಲ್ಲಿ E-Challan ವ್ಯವಸ್ಥೆ ಸಂಪೂರ್ಣವಾಗಿ ಆಕ್ಟಿವ್ ಆಗಿದೆ. ಅಂದರೆ ಕ್ಯಾಮೆರಾ ಮೂಲಕ ನಿಮ್ಮ ತಪ್ಪು ದಾಖಲಾಗುತ್ತೆ, ನಂತರ ನಿಮ್ಮ ವಾಹನಕ್ಕೆ ಚಲಾನ್ ಜನರೇಟ್ ಆಗುತ್ತೆ.
E-Challan ಬರುತ್ತಿರುವ ಮುಖ್ಯ ಕಾರಣಗಳು
- CCTV ಕ್ಯಾಮೆರಾದಲ್ಲಿ ರೆಡ್ ಸಿಗ್ನಲ್ ಜಂಪ್
- ಓವರ್ ಸ್ಪೀಡ್ ಕ್ಯಾಪ್ಚರ್
- ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸುವುದು
- ಹೆಲ್ಮೆಟ್ ಇಲ್ಲದೆ ಸವಾರ
- ಲೇನ್ ಡಿಸಿಪ್ಲಿನ್ ಉಲ್ಲಂಘನೆ
ಟ್ರಾಫಿಕ್ ಚಲಾನ್ ಚೆಕ್ ಮಾಡುವುದು ಹೇಗೆ?
ನಿಮ್ಮ ವಾಹನಕ್ಕೆ ಚಲಾನ್ ಬಂದಿದೆಯೇ ಎಂದು ತಿಳಿಯಲು ಈ ಮಾಹಿತಿ ಸಾಕು:
- Vehicle Number (KA-xx-xxxx)
- ಮೊಬೈಲ್ ಸಂಖ್ಯೆ (ಕೆಲವೊಮ್ಮೆ)
- RC ವಿವರಗಳು
ಸಾಮಾನ್ಯವಾಗಿ ನೀವು ಆಧಿಕೃತ ಟ್ರಾಫಿಕ್ / ಪರಿವಾಹನ್ ಪೋರ್ಟಲ್ ಮೂಲಕ ಚಲಾನ್ ಚೆಕ್ ಮಾಡಬಹುದು.
ಚಲಾನ್ ತಪ್ಪಿಸಲು 2026ರಲ್ಲಿ ಪಾಲಿಸಬೇಕಾದ ಟಿಪ್ಸ್
ಹೊಸ ಟ್ರಾಫಿಕ್ ನಿಯಮಗಳು 2026 ಚಲಾನ್ ದಂಡ ತಪ್ಪಿಸಲು ಈ 10 ಸಲಹೆಗಳನ್ನು ಫಾಲೋ ಮಾಡಿ:
- ಬೈಕ್‌ಗೆ ಯಾವಾಗಲೂ ISI ಹೆಲ್ಮೆಟ್ ಹಾಕಿ
- ಕಾರಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಿ
- ಸ್ಪೀಡ್ ಲಿಮಿಟ್ ಮೀರಿಸಬೇಡಿ
- ಸಿಗ್ನಲ್ ಜಂಪ್ ಮಾಡಬೇಡಿ
- ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಬೇಡಿ
- RC, ಲೈಸೆನ್ಸ್, ಇನ್ಶೂರನ್ಸ್, PUC ಸದಾ ಅಪ್‌ಡೇಟ್ ಇಡಿ
- ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಬೇಡಿ
- ಮದ್ಯಪಾನ ಮಾಡಿ ವಾಹನ ಓಡಿಸಬೇಡಿ
- ಲೇನ್ ಡಿಸಿಪ್ಲಿನ್ ಪಾಲಿಸಿ
- ರಾತ್ರಿ ಚಾಲನೆ ಮಾಡಿದಾಗ ಹೆಡ್‌ಲೈಟ್/ಇಂಡಿಕೇಟರ್ ಸರಿಯಾಗಿ ಬಳಸಿ
2026ರಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಏನು ಸಮಸ್ಯೆ?
ಚಲಾನ್ ಕೇವಲ ಹಣದ ಸಮಸ್ಯೆ ಅಲ್ಲ. ಕೆಲವು ಗಂಭೀರ ತಪ್ಪುಗಳಿಗೆ:
- ಲೈಸೆನ್ಸ್ ಸಸ್ಪೆಂಡ್
- ವಾಹನ ಸೀಜ್ (ಕೆಲವು ಸಂದರ್ಭಗಳಲ್ಲಿ)
- ಕೋರ್ಟ್ ಕೇಸ್
- ವಿಮೆ ಕ್ಲೇಮ್ ಸಮಸ್ಯೆ
- ಅಪಘಾತವಾಗಿದ್ರೆ ದೊಡ್ಡ ಲಾಸ್
ಇವುಗಳೆಲ್ಲಾ ಎದುರಾಗಬಹುದು.
FAQ: ಹೊಸ ಟ್ರಾಫಿಕ್ ನಿಯಮಗಳು 2026 ಚಲಾನ್ ದಂಡ ಬಗ್ಗೆ ಸಾಮಾನ್ಯ ಪ್ರಶ್ನೆಗಳು
Q1) 2026ರಲ್ಲಿ ಚಲಾನ್ ಹೆಚ್ಚು ಬರ್ತಾ ಇದೆ ಯಾಕೆ?
ಕ್ಯಾಮೆರಾ ನಿಗಾ ಹೆಚ್ಚಾಗಿದ್ದು, E-Challan ತಕ್ಷಣ ಜನರೇಟ್ ಆಗುತ್ತಿದೆ.
Q2) ಹೆಲ್ಮೆಟ್ ಇಲ್ಲದರೆ ಲೈಸೆನ್ಸ್ ಸಸ್ಪೆಂಡ್ ಆಗುತ್ತಾ?
ಕೆಲವು ಪ್ರಕರಣಗಳಲ್ಲಿ ಸಾಧ್ಯತೆ ಇದೆ. ಅದಕ್ಕಾಗಿ ಹೆಲ್ಮೆಟ್ ಕಡ್ಡಾಯವಾಗಿ ಹಾಕಿ.
Q3) ಮೊಬೈಲ್ ಬಳಸಿ ಡ್ರೈವಿಂಗ್ ಮಾಡಿದರೆ ಎಷ್ಟು ದಂಡ?
₹1,500 – ₹3,000 ವರೆಗೆ ದಂಡ ವಿಧಿಸಬಹುದು.
Q4) ಡ್ರಂಕ್ ಡ್ರೈವಿಂಗ್ ಮಾಡಿದರೆ ಏನಾಗುತ್ತೆ?
₹10,000 ದಂಡ + ಕೋರ್ಟ್/ಜೈಲು ಸಾಧ್ಯತೆ ಇದೆ. ಇದು ಅತ್ಯಂತ ಗಂಭೀರ ತಪ್ಪು.
ಸಾರಾಂಶ
ಹೊಸ ಟ್ರಾಫಿಕ್ ನಿಯಮಗಳು 2026 ಚಲಾನ್ ದಂಡ ಕರ್ನಾಟಕದ ಎಲ್ಲ ವಾಹನ ಚಾಲಕರಿಗೂ ಎಚ್ಚರಿಕೆಯ ಸಂದೇಶ. ನೀವು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ:
- ಹಣ ಉಳಿಯುತ್ತದೆ
- ಜೀವ ಸುರಕ್ಷಿತವಾಗುತ್ತದೆ
- ಅಪಘಾತಗಳು ಕಡಿಮೆಯಾಗುತ್ತವೆ
- ಲೈಸೆನ್ಸ್ ಸಮಸ್ಯೆ ತಪ್ಪುತ್ತದೆ
ಇಂದೇ ನೀವು ನಿಮ್ಮ ದಾಖಲೆಗಳು ಮತ್ತು ನಿಯಮ ಪಾಲನೆ ಚೆಕ್ ಮಾಡಿ. ಸುರಕ್ಷಿತವಾಗಿ ಚಾಲನೆ ಮಾಡಿ—ಚಲಾನ್ ತಪ್ಪಿಸಿ!