Mithos AI: ಜಗತ್ತನ್ನು ಬೆಚ್ಚಿಬೀಳಿಸಿದ ಹೊಸ AI ತಂತ್ರಜ್ಞಾನ! ಬ್ಯಾಂಕ್‌ಗಳಿಗೆ ಅಪಾಯವೇ?
ಸೈಬರ್ ಸುರಕ್ಷತೆಗಾಗಿ ಅಭಿವೃದ್ಧಿಯಾದ ತಂತ್ರಜ್ಞಾನವೇ ಈಗ ಜಾಗತಿಕ ಭೀತಿಗೆ ಕಾರಣವಾಗಿದೆಯೇ? ಇತ್ತೀಚಿನ ದಿನಗಳಲ್ಲಿ ಜಗತ್ತಿನ ತಂತ್ರಜ್ಞಾನ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿರುವ ಹೊಸ ಪದವೇ Mithos AI. ಕೃತಕ ಬುದ್ಧಿಮತ್ತೆಯ ಮುಂದಿನ ಹಂತವೆಂದು ಪರಿಗಣಿಸಲಾಗುತ್ತಿರುವ ಈ ಮಾದರಿ, ಸಾಮಾನ್ಯ AI ವ್ಯವಸ್ಥೆಗಳಿಗಿಂತ ಬಹಳ ಶಕ್ತಿಶಾಲಿಯಾಗಿದ್ದು, ಸೈಬರ್ ಸುರಕ್ಷತೆ, ಬ್ಯಾಂಕಿಂಗ್ ವ್ಯವಸ್ಥೆಗಳು ಮತ್ತು ಸರ್ಕಾರದ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ AI ತಂತ್ರಜ್ಞಾನವು ಒಂದೆಡೆ ಸೈಬರ್ ಅಪಾಯಗಳನ್ನು …